style="color: #808000;">ಕತ್ತೆಯೂ ಮಿಡತೆಗಳೂ>
ಮಿಡತೆಗಳ ಚಿರಿಗುಟ್ಟುವ ಧ್ವನಿ ಕೇಳಿದ ಕತ್ತೆಯೊಂದಕ್ಕೆ ಆಸಕ್ತಿ ಮೂಡಿತು. ಅಂಥದೇ ಇಂಪಾದ ಧ್ವನಿ ತನಗೂ ಬೇಕೆಂದು ಬಯಸಿ ಇಂಥ ಇಂಪಾದ ಕಂಠ ಪಡೆಯಲು ನೀವು ಅದೇನು ಆಹಾರ ಸೇವಿಸುತ್ತೀರಿ ಎಂದು ಅದು ಮಿಡತೆಗಳನ್ನು ಕೇಳಿತು. “ನಾವು ಮಂಜಿನ ಹನಿ ಕುಡಿಯುತ್ತೇವೆ” ಎಂದು ಮಿಡತೆಗಳು ಹೇಳಿದವು. ಕತ್ತೆ ತಾನು ಇನ್ನು ಮುಂದೆ ಮಂಜಿನ ಹನಿಗಳನ್ನು ಕುಡಿದೇ ಬದುಕುತ್ತೇನೆ ಎಂದು ನಿರ್ಧರಿಸಿತು. ಹಾಗೇ ಮಾಡುತ್ತ ಕೆಲವೇ ದಿನಗಳಲ್ಲಿ ಹಸಿವಿನಿಂದ ಸತ್ತೂ ಹೋಯಿತು. (ಈಸೋಪನ ಕಥೆ)
....................
ಪರೀಕ್ಷೆಯೊಂದರ ಉತ್ತರ ಪತ್ರಿಕೆಯ ಕೊನೆಗೆ ಹೀಗೆ ಬರೆಯಲಾಗಿತ್ತು:
ನಾನು ಬರೆದಿರುವುದೆಲ್ಲವೂ ಕಾಲ್ಪನಿಕ
ಇತರರ್ಯಾರದರೂ ಅದೇ ಬರೆದಿದ್ದರೆ ಅದು ಕಾಕತಾಳೀಯ!
....................
ನಾನು ನನ್ನ ದುಃಖವನ್ನು ಓಡ್ಕಾದಲ್ಲಿ ಮುಳುಗಿಸಲು ಪ್ರಯತ್ನಿಸಿದೆ. ಆದರೆ ಆ ದುಃಖಗಳು ಈಜುವುದನ್ನು ಕಲಿತುಬಿಟ್ಟಿವೆ!
- ಜೆಫ್ರಿ ಬರ್ನಾರ್ಡ್
....................
ರಾ...ರಾ...!
ಪೀಟರ್ ಫೂಟ್ ಮನ್ ಒಬ್ಬ ಡಚ್ ಚಿತ್ರಕಾರ. ಆತ ಮನುಷ್ಯನ ಅಂಗಗಳ ಚಿತ್ರ ರಚನೆಗೆ ಸಹಾಯಕವಾಗಲೆಂದು ತನ್ನ ಕೆಲಸದ ಕೋಣೆಯಲ್ಲಿ ಅಸ್ಥಿಪಂಜರವೊಂದನ್ನು ನೇತುಹಾಕಿಕೊಂಡಿದ್ದ. ಆತ ಅದೇ ಕೋಣೆಯಲ್ಲಿ ೧೬೯೨ ಡಿಸೆಂಬರ್ ೧೮ರಂದು ಭಯಭೀತನಾಗಿ ಸತ್ತ. ಆ ದಿನ ಭೂಕಂಪನವಾಗಿ ಆತ ತನ್ನ ಕೋಣೆಯಲ್ಲಿ ನೇತುಹಾಕಿಕೊಂಡಿದ್ದ ಅಸ್ಥಿಪಂಜರ ಕೈಬೀಸಿ ಕರೆಯುತ್ತಲಿತ್ತು!....................
ಓಹ್ ಹೌದಾ!
~ ತಲೆಯೆತ್ತಿ ಆಕಾಶವನ್ನು ನೋಡುವುದು ಹಂದಿಗಳಿಗೆ ಅಕ್ಷರಶಃ ಸಾಧ್ಯವಿಲ್ಲ!
~ ಬೆಂಕಿ ಪೊಟ್ಟಣ ಕಂಡುಹಿಡಿಯುವ ಮುನ್ನವೇ ಸಿಗರೇಟು ಲೈಟರ್ ಸಂಶೋಧಿಸಿದ್ದರು!
~ ಪ್ರತಿಯೊಬ್ಬರ ಬೆರಳಚ್ಚು ಬೇರೆ ಬೇರೆಯಾಗಿದ್ದಂತೆಯೇ ನಾಲಿಗೆಯ ಅಚ್ಚು ಸಹ ವಿಶಿಷ್ಟವಾಗಿರುತ್ತದೆ!
~ ಬಣ್ಣದ ಪದಾರ್ಥವನ್ನು ಹಾಕದಿದ್ದರೆ ಕೊಕೊ ಕೋಲಾ ಹಸಿರು ಬಣ್ಣದ್ದಾಗಿರುತ್ತದೆ!
~ ನೀಲಿ ಬಣ್ಣವನ್ನು ನೋಡಬಲ್ಲ ಏಕೈಕ ಪಕ್ಷಿಯೆಂದರೆ ಗೂಬೆ!
....................
ನನ್ನ ಬ್ಯೂಟಿ, ನಿನ್ನ ಬ್ರಿಲಿಯನ್ಸು!
ಜಾರ್ಜ್ ಬರ್ನಾಡ್ ಷಾ ಬ್ರಿಟನ್ನಿನ ಅತ್ಯಂತ ಮೇಧಾವಿ ನಾಟಕಕಾರ. ಸಾಮಾನ್ಯ ರೂಪಿನ ಜಾರ್ಜ್ ಬರ್ನಾಡ್ ಷಾ ತಮ್ಮ ಕಟು ವ್ಯಂಗ್ಯೋಕ್ತಿಗಳಿಗೆ ಹೆಸರು
ವಾಸಿಯಾದವರು. ಒಮ್ಮೆ ಪಾರ್ಕೊಂದರಲ್ಲಿ ಬರ್ನಾಡ್ ಶಾ ಕುಳಿತಿರುವಾಗ ಸುರಸುಂದರಿಯೊಬ್ಬಳು ಅವರ ಬಳಿಗೆ ಬಂದು, “ಮಿಸ್ಟರ್ ಷಾ ನಾವಿಬ್ಬರೂ ಮದುವೆಯಾದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ? ನಮ್ಮ ಮಕ್ಕಳಿಗೆ ನನ್ನ ಸೌಂದರ್ಯ ಹಾಗೂ ನಿಮ್ಮ ಬುದ್ಧಿವಂತಿಕೆ ಬರುತ್ತದೆ” ಎನ್ನುವ ಮೂಲಕ ಬರ್ನಾಡ್ ಷಾರನ್ನು ಕಿಚಾಯಿಸಿದಳು.ಸ್ವಲ್ಪವೂ ತಡವಿಲ್ಲದೆ ಷಾ ಉತ್ತರಿಸಿದರು, “ಮೈ ಡಿಯರ್ ಲೇಡಿ, ಅಕಸ್ಮಾತ್ ನೀನು ಹೇಳಿದ್ದು ಉಲ್ಟಾ ಆಗಿ ನಮ್ಮ ಮಕ್ಕಳಿಗೆ ನನ್ನ ರೂಪು ಹಾಗೂ ನಿನ್ನ ಬುದ್ಧಿವಂತಿಕೆ ಬಂದು ಬಿಟ್ಟರೆ...”
ಸಹಿ ಹಾಕುವುದು ಕಾಲಲ್ಲೋ!
ಸಣ್ಣ ಕಥೆಗಳ ಜಗತ್ತಿನಲ್ಲಿ ಓ ಹೆನ್ರಿಯ ಹೆಸರು ಕೇಳದವರಿಲ್ಲ. ಆತ ತನ್ನ ಕಥೆಗಳನ್ನು ಪ್ರಕಾಶಕನೊಬ್ಬನಿಗೆ ಕಳುಹಿಸಿದ್ದ. ಆದರೆ ಬಹಳಷ್ಟು ಸಮಯ ಕಳೆದರೂ ಪ್ರಕಾಶಕನಿಂದ ಸಂಭಾವನೆ ಸಿಕ್ಕಲಿಲ್ಲ. ಕಾರಣ ಏನೆಂದು ತಿಳಿದುಕೊಳ್ಳಲು ಪ್ರಕಾಶಕನ ಬಳಿಗೆ ಹೋದ. ಅಂಗಡಿಯಲ್ಲಿ ಪ್ರಕಾಶಕ ಇರಲಿಲ್ಲ. ಬೇರೆ ಹುಡುಗನಿಬ್ಬ ಇದ್ದ. ಹೆನ್ರಿ ಪ್ರಕಾಶಕನ ಬಗ್ಗೆ ವಿಚಾರಿಸಿದಾಗ, ಪ್ರಕಾಶಕನು ಕಾಲು ಉಳುಕಿನಿಂದಾಗಿ ಅಂಗಡಿಗೆ ಬರುತ್ತಿಲ್ಲವೆಂದು ತಿಳಿಯಿತು. ಹೆನ್ರಿ ಆ ಹುಡುಗನಿಗೆ, “ಆಶ್ಚರ್ಯ, ನಿಮ್ಮ ಪ್ರಕಾಶಕರು ತಮ್ಮ ಕಾಲಿನಿಂದ ಚೆಕ್ಕಿಗೆ ರುಜು ಹಾಕುತ್ತಾರೆ ಎಂದು ಈಗ ಗೊತ್ತಾಯಿತು.” ಎಂದ.
ಲೋಡ್ ಆಗುತ್ತಿದೆ......