Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ದೇಶ ದ್ರೋಹವಾ, ಬೆಳವಣಿಗೆಯ ತುಡಿತವಾ?


ಪ್ರತಿಭಾ ಪಲಾಯನವನ್ನು ದೇಶದ ಅತಿದೊಡ್ಡ ಸಮಸ್ಯೆಯಾಗಿ ಕಾಣುವವರಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದು, ನಮ್ಮ ಸರ್ಕಾರದ ಹಣದಲ್ಲಿ ಶಿಕ್ಷಣವನ್ನು ಪಡೆದು ಕೆಲಸ ಮಾಡಲು, ಸಂಪಾದನೆ ಮಾಡಲು ವಿದೇಶಗಳಿಗೆ ಹೋಗುವುದು ನಮ್ಮ ದೇಶಕ್ಕೆ ಮಾಡುವ ದ್ರೋಹ. ನಮ್ಮ ಪ್ರತಿಭಾವಂತರು ಬೇರಾವುದೋ ದೇಶವನ್ನು ಬೆಳೆಸುವುದು ನಿಜಕ್ಕೂ ಅಕ್ಷಮ್ಯ ಎನ್ನುವವರಿದ್ದಾರೆ.
ರೆಕ್ಕೆ ಬಲಿತು ತನ್ನ ದಾರಿ ತಾನು ಕಂಡುಕೊಳ್ಳುವ ತುಡಿತ ತೋರಿದ ಹಕ್ಕಿಯನ್ನು ಪಂಜರದಲ್ಲಿ ಹಾಕಿಡುವುದು ಅಮಾನವೀಯ. ಪ್ರತಿಭಾವಂತರು ತಮ್ಮ ಪ್ರತಿಭೆಗೆ ತಕ್ಕ ಪ್ರೋತ್ಸಾಹಕರವಾದ ವಾತಾವರಣ ಎಲ್ಲಿ ಸಿಕ್ಕುತ್ತದೋ ಅಲ್ಲಿಗೆ ಹೋಗಿ ಬೆಳೆಯಲು ಹಂಬಲಿಸುವುದು ತೀರಾ ಸಹಜ. ಇದಕ್ಕೆ ಅನಗತ್ಯವಾದ ಭಾವುಕತೆಯನ್ನು ಲೇಪಿಸುವುದು ಒಳ್ಳೆಯ ಲಕ್ಷಣವಲ್ಲ ಎಂಬ ವಾದ ಮಂಡಿಸುವವರಿದ್ದಾರೆ.
ಈ ಎರಡು ಧೃವಗಳ ನಡುವಿನ ಭೂಖಂಡಗಳೆಡೆಗೆ ಬೆಳಕು ಬೀರುವ ಪ್ರಯತ್ನದ ಫಲವೇ ಈ ಸಂಚಿಕೆ.

- ಸಂ


ಹಕ್ಕು ನಿರಾಕರಣೆ